== ಚುನಾವಣಾ ವಿವರಗಳು == 1957ರ ಫೆಬ್ರವರಿ 24ರಂದು ಆರಂಭಗೊಂಡ ದ್ವಿತೀಯ ಲೋಕಸಭಾ ಚುನಾವಣೆ ಅತ್ಯಂತ ಯಶಸ್ವಿಯಾಗಿ ಮುಗಿದದ್ದು ಜೂನ್ 9ರಂದು. 403 ಕ್ಷೇತ್ರಗಳಿಗೆ ನಡೆದ ಈ ಚುನಾವಣೆಯಲ್ಲಿ 91 ಕ್ಷೇತ್ರಗಳು ದ್ವಿಸದಸ್ಯ ಕ್ಷೇತ್ರಗಳಾಗಿದ್ದುದು ವಿಶೇಷ. ಇನ್ನುಳಿದ 312 ಕ್ಷೇತ್ರಗಳು ಏಕಸದಸ್ಯ ಕ್ಷೇತ್ರಗಳಾಗಿದ್ದವು. ಹಿಂದಿನ ಚುನಾವಣೆಯಂತೆ ಈ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವು ಅದ್ಭುತ ಗೆಲುವು ಸಾಧಿಸಿ 371 ಸ್ಥಾನಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿತು. ಈ ಚುನಾವಣೆಯ ಮತ್ತೊಂದು ವಿಶೇಷ ಎಂದರೆ 42 ಸ್ಥಾನಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದರು. === ಸಂಸದರ ಪಟ್ಟಿ === == ಉಲ್ಲೇಖಗಳು ==